ಮುಂಗುಸಿಗಳ ಜೊತೆಗೆ ಧ್ಯಾನ : wildgundmi.com ಮಾಡುವಾಗ ಕಲಿತ ಪಾಠಗಳು: ಪ್ರಾಣಿ ಪಕ್ಷಿಗಳ ಛಾಯಾಚಿತ್ರ ತೆಗೆಯುವ ಪ್ರಯತ್ನ ಮಾಡುವಾಗ ನಾನು ಎರಡು ವಿಷಯಗಳೊಂದಿಗೆ ವ್ಯವಹರಿಸುತ್ತೇನೆ. ಒಂದು: ಪ್ರಾಣಿ ಮತ್ತು ಅದರ ಪರಿಸರ. ಇನ್ನೊಂದು : ನಾನು ಮತ್ತು ನನ್ನ ಆಂತರಿಕ ಪರಿಸರ, ಮನಸ್ಸು ಮತ್ತು ದೇಹ. ಅರ್ಥವತ್ತಾದ ಛಾಯಾಚಿತ್ರ ತೆಗೆಯಲು ಈ ಎರಡು ವಿಷಯಗಳು ಒಂದು ತರಹದ ಸಮರಸ್ಯದೊಂದಿಗೆ ನೃತ್ಯ ಮಾಡಬೇಕಾಗುತ್ತದೆ. ಹೊರಗಿನ ಪರಿಸರವನ್ನು ನಾನು ನಿಯಂತ್ರಣ ಮಾಡಲು ನನಗೆ ಸಾಧ್ಯವಿಲ್ಲ. ಬಹಳ ಪ್ರಯತ್ನ ಮಾಡಿದರೆ ಅದು ವನ್ಯ ಛಾಯಾಗ್ರಾಹನದ "ವನ್ಯ" ಭಾಗವಕ್ಕೆ ಅಗೌರವ ಕೊಟ್ಟ ಹಾಗೆ! ಆದ್ದರಿಂದ ನಿಯಂತ್ರಣ ಮಾಡಲು ಸಾಧ್ಯ ಇರುವುದು ಬರೀ ಒಂದೇ ವಿಷಯ: ನನ್ನ ದೇಹ, ಮನಸ್ಸು ಮತ್ತು ಚಲನೆಗಳು. "ನಿಯಂತ್ರಣ" ಎನ್ನೂವುದೂ ತಪ್ಪಾಗಬಹುದು, "ಕಲಿತುಕೊಳ್ಳುವುದು" ಎಂದರೆ ಸರಿಯಾಗ ಬಹುದು. ಈ ನ್ರತ್ಯಕ್ಕೆ ಬಹಳ ತರಹದ ಅಂಶಗಳಿವೆ, ಒಂದೊಂದಾಗಿ ಬರೆಯುವೆನು ಇಲ್ಲಿ :ಮೊದಲು, ಉಪಕರಣ. ಕ್ಯಾಮೆರಾ. ಸರಿಯಾದ ಚೌಕಟ್ಟಿನಲ್ಲಿ ಸರಿಯಾದ ಪ್ರಮಾಣದ ಬೆಳಕನ್ನು ಸೆರೆಹಿಡಿಯಲು ಕನಿಷ್ಠ ಕಾರ್ಯಾಚರಣೆಯ ಪಾಂಡಿತ್ಯವನ್ನು ನಾನು ತಿಳಿದುಕೊಳ್ಳಬೇಕು. ನಾನು ಹೆಚ್ಚು ಅಭ್ಯಾಸ ಮಾಡಿದಷ್ಟೂ, ಇದನ್ನು ನನ್ನ ಸೂಕ್ತ default settings ,exposure , ಕ್ಯಾಮೆರಾದ ಸಮತೋಲನ ಮತ್ತು ಸಂಯೋಜನೆಯೊಂದಿಗೆ ಪ್ರಾರಂಭಿಸುವುದು ಹೆಚ್ಚು ಸ್ವಾಭಾವಿಕವಾಗುತ್ತದೆ.ನಂತರ, ನನ್ನ ಸ್ವಂತ ಅಭ್ಯಾಸಗಳನ್ನು ತಿಳಿದುಕೊಳ್ಳುವುದು ಮತ್ತು ಅವುಗಳನ್ನು ಬದಲಾಯಿಸಲು ಕಲಿಯುವುದು. ಒಂದು ಉದಾಹರಣೆ: ನನಗೆ ಎರಡೇ click ಸಿಡಿಸಿ ನಿಲ್ಲಿಸುವ ಪ್ರವೃತ್ತಿ ಇದೆ. ನಾನು ಎರಡರಲ್ಲಿ ನಿಲ್ಲಿಸುವುದು ಏಕೆ? ಕ್ಯಾಮೆರಾ ನಿಲ್ಲುವವರೆಗೂ ಏಕೆ ಮುಂದುವರಿಯುವುದಿಲ್ಲ ಎಂದು ನನಗೆ ತಿಳಿದಿಲ್ಲ. ಈ ಅಭ್ಯಾಸದಿಂದಾಗಿ ನಾನು ಅನೇಕ ಉತ್ತಮ ಛಾಯಾಚಿತ್ರಗಳ್ಳನ್ನು ತಪ್ಪಿಸಿಕೊಂಡಿದ್ದೇನೆ. ಆದ್ದರಿಂದ, ಸಾಧ್ಯವಾದಷ್ಟು ಕ್ಲಿಕ್ ಮಾಡುವ ಉದ್ದೇಶವನ್ನು ಸ್ಪಷ್ಟವಾಗಿ ಹೊಂದಿಸಲು ನಾನು ಅಭ್ಯಾಸ ಮಾಡಿದ್ದೇನೆ!ನಂತರ ಉಸಿರಾಟದ ಆಟ! ಏನಾದರೂ ಸಂಭವಿಸಿದಾಗ ಕ್ಲಿಕ್ ಮಾಡಲು ನಾನು ನನ್ನ ಉಸಿರನ್ನು ಸ್ಥಿರವಾಗಿ ಹಿಡಿದಿಟ್ಟುಕೊಳ್ಳಬೇಕು. ಹೀಗಾಗಿ ಸ್ವಲ್ಪ ಪ್ರಮಾಣದ ಉಸಿರಾಟದ ನಿಯಂತ್ರಣವೂ ಅಗತ್ಯ. ವಿಶೇಷವಾಗಿ ನಾನು ಟ್ರೈಪಾಡ್‌ನಂತಹ ಬೆಂಬಲವನ್ನು ಬಳಸದಿದ್ದಾಗ ಅಥವಾ ಮರದ ಬುಡದ ಮೇಲೆ ನನ್ನ ಕೈಗಳನ್ನು ಇಡದಿದ್ದಾಗ ಕ್ಯಾಮೆರಾವನ್ನು ದೀರ್ಘಕಾಲದವರೆಗೆ ಸ್ಥಿರವಾಗಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಬೇಕು. ಈಗ ನಾನು 5-6 ನಿಮಿಷಗಳವರೆಗೆ ಕ್ಯಾಮೆರಾವನ್ನು ಹೆಚ್ಚು ಕಡಿಮೆ ಸ್ಥಿರವಾಗಿ ಹಿಡಿದಿಟ್ಟುಕೊಳ್ಳಬಲ್ಲೆ, ಅಸಹನೀಯ ನೋವು ಇದ್ದರೂ ಸಹ. ನನ್ನ ಗರಿಷ್ಠ ದಾಖಲೆ: ನವಿಲು ನನ್ನ ಛಾವಣಿಯಿಂದ ಹಾರಲು 12 ನಿಮಿಷ ಕಾಯ್ದಿದು, ಆದರೆ ಅದು ಹಾರಲೇ ಇಲ್ಲ!ಮುಂದಿನದು: ನನ್ನ ಚಲನವಲನಗಳು. ನಾನು ಪ್ರಾಣಿಗಳ ಆವಾಸಸ್ಥಾನವನ್ನು ಪ್ರವೇಶಿಸಿದಾಗ ನಾನು ಅವುಗಳಿಗೆ ವಿದೇಶಿ ಜೀವಿ ಎಂದು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಸ...
First seen: 2025-10-15 00:40
Last seen: 2025-10-15 01:40